ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಮಾರೂರು 5 ಸೆಂಟ್ಸ್‌ನಲ್ಲಿ ವಾಸಿಸುತಿದ್ದ ತಾಯಿ ಮತ್ತು ಮಗ ಗುರುವಾರ ಮಾಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಯಿಂದ ತಾಯಿ ಮೃತಪಟ್ಟಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಮಗನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಾರೂರು 5 ಸೆಂಟ್ಸ್ ನಿವಾಸಿ ಯಮುನಾ ಪೂಜಾರ್ತಿ (55) ಮೃತಪಟ್ಟವರು. ಯಮುನಾ ಅವರ ಮಗ ಪ್ರವೀಣ್ ಯಾನೆ ಕರಿಯ(29) ಆತ್ಮಹತ್ಯೆ ಯತ್ನದಿಂದಾಗಿ ಗಂಭೀರ ಸ್ಥಿತಿಯಲ್ಲಿದ್ದಾರೆ.
ಗುರುವಾರ 2.30ರ ವೇಳೆಗೆ ಯಮುನಾ ಅವರ ಮನೆಯಲ್ಲಿ ಬೊಬ್ಬೆ ಹಾಕಿದ ಶಬ್ದ ಕೇಳಿದ್ದು, ಸ್ಥಳೀಯರು ಮನೆ ಹತ್ತಿರ ಬಂದಾಗ ಮನೆಯ ಒಳಗಿನಿಂದ ಬೀಗ ಹಾಕಲಾಗಿತ್ತು. ಕಿಟಕಿ ಮುಖಾಂತರ ನೋಡಿದಾಗ ತಾಯಿ-ಮಗ ನೇಣು ಬಿಗಿದುಕೊಂಡಿದ್ದು, ಮಗ ಬೊಬ್ಬೆ ಹಾಕುತ್ತಿದ್ದ ಎನ್ನಲಾಗಿದೆ.
ಪ್ರವೀಣ್ ಅವರನ್ನು ತಕ್ಷಣ ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಲಾಗಿದೆ. ಪ್ರವೀಣ್ ಅವರು ಮಂಗಳೂರಿನಲ್ಲಿ ಹೋಟೆಲ್ ಕಾರ್ಮಿಕರಾಗಿ ದುಡಿಯುತ್ತಿದ್ದು, ಕೆಲವು ದಿನಗಳ ಹಿಂದೆ ರಜೆಯ ಮೇಲೆ ಬಂದಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ಮೂಡುಬಿದರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ