ಮಂಗಳೂರು,ಏ.11: ಕುಳಾಯಿಯಲ್ಲಿ 2013ರಲ್ಲಿ ಜರಗಿದ್ದ ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನದ ‘ವರ್ಷದ ನೆನಪು’ ಕಾರ್ಯಕ್ರಮದ ಅಂಗವಾಗಿ ಯುಗಾದಿ ಸಾಹಿತ್ಯೋತ್ಸವ- ಕವಿಗೋಷ್ಠಿ-ಅಭಿನಂದನೆ- ಪುಸ್ತಕ ಬಿಡುಗಡೆ ಕಾರ್ಯಕ್ರಮವು ಕುಳಾಯಿ ಶ್ರೀ ವಿಷ್ಣುಮೂರ್ತಿದೇವಸ್ಥಾನದ ವಠಾರದಲ್ಲಿ ಜರಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಸಾಹಿತ್ಯೋತ್ಸವದ ಮೂಲಕ ಹಬ್ಬಗಳನ್ನು ಆಚರಿಸುವ ಸಂಸ್ಕೃತಿಯನ್ನು ಮೈಗೂಡಿಸಿಕೊಂಡರೆ ಮಾತ್ರ ಆಧುನೀಕರಣದ ಈ ಕಾಲಘಟ್ಟದಲ್ಲಿಯೂ ನಾಡು ನುಡಿಯ ಉಳಿವು ಸಾಧ್ಯ ಹಾಗೂ ಪರಂಪರೆಯಿಂದ ಒಂದು ತಲೆಮಾರಿಗೆ ದಾಟಿಸಿದಂತಾಗುವುದೆಂದು ಹೇಳಿದರು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಮೋಹನದಾಸ ಸುರತ್ಕಲ್ ಅವರು ಸಾಹಿತ್ಯಾಸಕ್ತಿಯ ಜೊತೆಗೆ ಹೊಸ ತಲೆಮಾರಿನ ಕವಿಗಳು ಕನ್ನಡಕಾವ್ಯ ಪರಂಪರೆಯನ್ನು ಅಭ್ಯಸಿಸಿ ಕವನ ರಚನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು ಹಾಗೂ ಪ್ರಕೃತಿಯ ಪ್ರೇಮದ ಸಹಬಾಳ್ವೆಯ ಕವನಗಳನ್ನು ರಚಿಸಬೇಕು ಎಂದು ತಿಳಿಸಿದರು.
ಕವಿಗೋಷ್ಠಿಯಲ್ಲಿ ರಾಮಚಂದ್ರ ಬೈಕಂಪಾಡಿ, ಯೋಗೀಶ್ ಕಾಂಚನ್, ಪ್ರವೀಣ್ ಬೈಕಂಪಾಡಿ, ಪ್ರಕಾಶ್‌ಆವರ್ಸೆ, ಮಹೇಶ ಮೂರ್ತಿ ಸುರತ್ಕಲ್, ಆನಂದ ಭಟ್ ಕೆಕ್ಕಾರು, ಪವನ್ ಮೈರ್ಪಾಡಿ, ಸತ್ಯವತಿ ಹರಿಕೃಷ್ಣ ಕೆ. ಕಲಾವತಿ, ಗುಣವತಿ ರಮೇಶ್, ಶೈಲಜಾ ಪುಡುಕೋಳಿ, ಸುಮಾಗೋಪಾಡ್ಕರ್, ಸುಮಾ ಬಾರಕೂರು, ಸಾವಿತ್ರಿ ರಮೇಶ ಭಟ್, ಕು| ರೀಟಾ, ಶಾಂತಳ, ಶ್ರೀಮತಿ, ಜಯಂತಿ ಎಸ್. ಹೊಳ್ಳ, ರಾಧಾಕೃಷ್ಣ ಹೆಗಡೆ, ಅಶೋಕ್‌ಕುಮಾರ್ ಭಾಗವಹಿಸಿದ್ದರು.
ವಿನಯಆಚಾರ್, ಶ್ರೀಮತಿ ವಿಜಯಲಕ್ಷ್ಮೀ ಬಿ. ಶೆಟ್ಟಿ, ದೇವಳದ ಕೃಷ್ಣ ಹೆಬ್ಬಾರ್, ಪ್ರೊ. ಕೃಷ್ಣ ಮೂರ್ತಿ,ಮಹೇಶ್ ಮೂರ್ತಿ ಉಪಸ್ಥಿತರಿದ್ದರು.