‘ಬಿಗ್ ಬಾಸ್’ ರಿಯಾಲಿಟಿ ಶೋ ಮುಗಿದು ಆಗಲೇ ಸುಮಾರು ದಿನಗಳೆ ಆದವು. ನಾಲ್ಕನೆ ಆವೃತ್ತಿಯು ಶುರುವಾಗುತ್ತದೆ ಎನ್ನುವ ಗುಮಾನಿ ಇತ್ತಾದರೂ ಅದು ನಿಜಾನಾ ಅಥವಾ ಸುಳ್ಳಾ ಎನ್ನುವ ಅನುಮಾನ ಇದ್ದೇ ಇತ್ತು.
ಈಗ ಈ ಅನುಮಾನವನ್ನೆಲ್ಲಾ ಬದಿಗೆ ಸರಿಸುವಂತೆ ‘ಬಿಗ್ ಬಾಸ್ 4’ ಶುರುವಾಗೋದು ಗ್ಯಾರಂಟಿ ಎನ್ನುತ್ತಿವೆ ಮೂಲಗಳು. ಕಿಚ್ಚ ಸುದೀಪ್ ಅವರೇ ಇದನ್ನೂ ನಡೆಸಿಕೊಡುತ್ತಿದ್ದು ಸೆಲೆಬ್ರಿಟಿಗಳ ಜೊತೆಗೆ ಸಾಮಾನ್ಯ ಜನರು ಈ ಬಾರಿಯ ‘ಬಿಗ್ ಬಾಸ್ 4ರಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ.
ಇದರ ಜೊತೆಗೆ ಮತ್ತೊಂದು ವಿಶೇಷ ಈ ಬಾರಿಯ ಶೋನಲ್ಲಿದೆ. ಅದೇ ಸೀಕ್ರೆಟ್ ಕ್ಯಾಮರಾ. ಮೊದಲ ಮೂರು ಶೋಗಳಲ್ಲಿ ಕ್ಯಾಮರಾಗಳು ಎಲ್ಲೆಲ್ಲಿವೆ ಎನ್ನುವುದು ಸ್ಪರ್ಧಿಗಳಿಗೆ ಕಾಣುತ್ತಿತ್ತು ಹಾಗಾಗಿ ಸ್ಪರ್ಧಿಗಳು ಕೆಲವೊಮ್ಮೆ ನಾಟಕೀತೆ ಮಾಡಲು ಸಹಕಾರಿಯಾಗುತ್ತಿತ್ತು ಅವರ ನೈಜ ಚಿತ್ರಣ ನೋಡಲು ಸಿಗುತ್ತಿರಲಿಲ್ಲ ಆದರೆ ಈ ಬಾರಿ ಇವುಗಳಿಗೆ ಮುಕ್ತಿಹಾಕಲು ತಂಡ ಈ ಐಡಿಯಾ ಉಪಯೋಗಿಸುತ್ತಿದೆ.
ಈಗಲಾದರು ಸ್ಪರ್ಧಿಗಳು ತಮ್ಮ ನೈಜ ವರ್ತನೆಯನ್ನು ತೋರಿಸುತ್ತಾರಾ ? ಕಾದು ನೋಡಬೇಕು. ಕಲರ್ಸ್ ಕನ್ನಡದವರೇ ಇದನ್ನೂ ನಿರ್ಮಾಣಮಾಡುತ್ತಿದ್ದು, ಯಾವಾಗ ಆರಂಭವಾಗಲಿದೆ ಎನ್ನುವುದು ಇನ್ನೂ ಗುಟ್ಟಿನ ವಿಷಯವಾಗಿದೆ.