Uncategorized

ಜಿಗರ್ ಥಂಡ ಚಿತ್ರದ ಆಡಿಯೋ ರಿಲೀಸ್’ನಲ್ಲಿ ಅಚ್ಚರಿ ಮೂಡಿಸಿದ ಸುದೀಪ್ ದಂಪತಿ!

Pinterest LinkedIn Tumblr

sudeep_jigar_audiorelc

ಬೆಂಗಳೂರು,ಮೇ.12:  ನಟ ಸುದೀಪ್ ಮತ್ತು ಪತ್ನಿ ಪ್ರಿಯಾ ಪರಸ್ಪರ ಒಪ್ಪಿಕೊಂಡು ಡಿವೋರ್ಸ್ ನೀಡುವುದಕ್ಕೆ ಮುಂದಾಗಿದ್ದರು ಸುದ್ದಿಯಾಗಿದ್ದರು. ಆ ನಂತರ ಎಲ್ಲೂ ಜೊತೆಯಾಗಿ ಕಾಣಿಸಿಕೊಂಡಿರಲಿಲ್ಲ. ಆದರೆ ಸುದೀಪ್ ನಿರ್ಮಾಣ ಮಾಡಿರುವ ಜಿಗರ್ ಥಂಡ ಚಿತ್ರದ ಆಡಿಯೋ ರಿಲೀಸ್’ನಲ್ಲಿ ಇವರಿಬ್ಬರೂ ಜೊತೆಯಾಗಿ ಕಾಣಿಸಿಕೊಂಡು ಎಲ್ಲರಿಗೂ ಅಚ್ಚರಿ ಪಡಿಸಿದರು.

ಮುದ್ದಿನ ಮಗಳು ಸಾನ್ವಿ ಕೂಡ ಜೊತೆಯಿದ್ದು, ಇಬ್ಬರು ಕೂಡ ತುಂಬಾನೆ ಅನ್ಯೋನ್ಯವಾಗಿ ಮಾತಾಡಿದರು. ಸುದೀಪ್ ಚಿತ್ರಕ್ಕೆ ಸಹಕರಿಸಿದ ಪ್ರಿಯಾಗೆ ಥ್ಯಾಂಕ್ಸ್ ಕೂಡ ಹೇಳಿದರು. ಕಾರ್ಯಕ್ರಮದಲ್ಲಿ ಸುದೀಪ್ ತಂದೆ ಸಂಜೀವ್ ಕೂಡಾ ಭಾಗವಹಿಸಿದರು. ನಟ ರವಿಚಂದ್ರನ್, ವಿಲನ್ ರವಿಶಂಕರ್ ಸೇರಿದಂತೆ ಜಿಗರ್ ಥಂಡ ತಂಡ ಆಡಿಯೋ ರಿಲೀಸ್’ನಲ್ಲಿ ಭಾಗವಹಿಸಿತ್ತು.

ಒಟ್ಟಿನಲ್ಲಿ ಸುದೀಪ್-ಪ್ರಿಯಾ ಆತ್ಮೀಯತೆಯಿಂದ ಇರುವುದನ್ನು ನೋಡಿದವರಿಗೆ ಇವರಿಬ್ಬರೂ ನಿಜಕ್ಕೂ ಡಿವೋರ್ಸ್ ನೀಡುತ್ತಿದ್ದಾರಾ ಎನ್ನುವ ಸಂಶಯ ಮೂಡದೆ ಇರದು.

Write A Comment