ಮಂಗಳೂರು : ಇತ್ತೀಚಿಗೆ ಮಂಗಳೂರಿನ ಅರ್ಯ ಸಮಾಜದಲ್ಲಿ ನಡೆದ ಅಂತರ್ಜಾತಿ ವಿವಾಹ ಒಂದು ಹೊಸ ತಿರುವನ್ನು ಪಡೆದುಕೊಂಡಿದ್ದು, ಮದುಮಗಳೆ ಮದುಮಗನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಘಟನೆ ನಡೆದಿದೆ.
ಕೆಲವು ದಿನಗಳ ಹಿಂದೆ ಹಿಂದೂ ಯುವಕ ರೋಷನ್ ಶೆಟ್ಟಿ (24) ಎಂಬಾತನ ಜೊತೆ ಕ್ರೈಸ್ತ ಯುವತಿ ಎಲಿಯಾರ್ ಪದವಿನ ಪ್ಯಾಟ್ರಿಕ್ ಡಿಸೋಜ ಎಂಬವರ ಮಗಳು ವಿವಿಟ ಡಿ ಸೋಜ (ಸೋನಿಯಾ) (23) ಜೊತೆ ಆರ್ಯ ಸಮಾಜದಲ್ಲಿ ಬಜರಂಗದಳದ ಸದಸ್ಯರು ಹಾಗೂ ಕೆಲವು ಪೊಲೀಸರ ಸಮ್ಮುಖದಲ್ಲಿ ಮದುವೆ ನಡೆದಿತ್ತು.
ಆಕೆ ಕ್ರೈಸ್ತ ಧರ್ಮದವಳಾದರೆ, ಆತ ಹಿಂದೂ. ಇಬ್ಬರೊಳಗೂ ಪ್ರೀತಿ ಹುಟ್ಟಿ ಕೊನೆಗೆ ಮದುವೆಯಲ್ಲಿ ಕೊನೆಗೊಂಡಿದೆ.ಕೆಲವು ವರ್ಷಗಳ ಹಿಂದೆ ಪ್ರೀತಿ, ಪ್ರೇಮದ ಬಲೆಗೆ ಬಿದ್ದ ಈ ಜೋಡಿಗಳು ಸರಳ ಅಂತರ್ಜಾತಿ ವಿವಾಹ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾದ್ಯಮಗಳು ವರದಿ ಪ್ರಕಟಿಸಿದ್ದವು.
ಕಳೆದ ಮೂರು ವರ್ಷಗಳಿಂದ ರೋಶನ್ ಶೆಟ್ಟಿಯನ್ನು ಪ್ರೀತಿಸುತ್ತಿದ್ದ ಈಕೆ ಅ.16ರಂದು ತನ್ನ ಇಷ್ಟದಿಂದಲೇ ಮನೆಯವರ ವಿರೋಧ ಕಟ್ಟಿಕೊಂಡು ಹಿಂದೂ ಸಂಪ್ರದಾಯದ ಪ್ರಕಾರ ಆರ್ಯ ಸಮಾಜದಲ್ಲಿ ಮದುವೆಯಾಗಿದ್ದಳು ಎನ್ನಲಾಗಿತ್ತು.
ಆದರೆ ಇದೀಗ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ತನ್ನನ್ನು ಅಪಹರಿಸಿ ಬಲಾತ್ಕಾರದಿಂದ ನನ್ನನ್ನು ಮದುವೆ ಮಾಡಿಸಲಾಗಿದೆ ಎಂದು ಮದುಮಗಳು ಮದುಮಗನ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾಳೆ. ವಿವಿಟ ತನ್ನ ಸಹೋದರನ ಜೊತೆಗೆ ಅ.21ರಂದು ಕೊಣಾಜೆ ಠಾಣೆಗೆ ತೆರಳಿ ರೋಶನ್ ಮತ್ತು ಇತರ ಐದು ಮಂದಿ ಸೇರಿ ಬಲಾತ್ಕಾರವಾಗಿ ಅಪಹರಿಸಿ ಆರ್ಯ ಸಮಾಜದಲ್ಲಿ ಮದುವೆ ಮಾಡಿಸಿದ್ದಾರೆ ಎಂದು ದೂರು ನೀಡಿದ್ದಾಳೆ. ಕೊಣಾಜೆ ಪೊಲೀಸರು ಆರೋಪಿ ರೋಶನ್ ಹಾಗೂ ವಿ.ಎಚ್.ಪಿ ಹಾಗೂ ಬಜರಂಗದಳದ ಐವರು ಸದಸ್ಯರಾದ ಜಗದೀಶ್ ಶೇಣವ, ದಿನೇಶ್ ಕದ್ರಿ, ಶರತ್ ಅಂಬ್ಲಮೊಗರು, ಗಣೇಶ್ ಕುಂಪಲ ಮತ್ತು ಪ್ರವೀಣ್ ಕುತರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
1 Comment
BAJA MANGA MATTU MOORKARA SENEGALINDA KOMU DWESHAVANNU MUNDITTU HENNUMAKKALA JEEVANAVANNU HALUMADUVA LOVE JEHAD.