ಉಡುಪಿ: ಇತ್ತೀಚಿಗೆ ಕುಂದಾಪುರ ತಾಲೂಕಿನ ತ್ರಾಸಿ ಸಮೀಪದ ಮೊವಾಡಿ ಕ್ರಾಸ್ ಬಳಿ ಡಾನ್‌ಬಾಸ್ಕೋ ಶಾಲೆಯ ಮಕ್ಕಳನ್ನು ಶಾಲೆಗೆ ಕೊಂಡೊಯ್ಯುವ ಸಂದರ್ಭದಲ್ಲಿ ಸಂಭವಿಸಿದ ರಸ್ತೆ ಅಫಘಾತದಲ್ಲಿ ೮ ಮಕ್ಕಳು ಮರಣ ಹೊಂದಿರುವ ಹಿನ್ನಲೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಕೃಪಾ ಅಮರ್ ಆಳ್ವ ಇವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಹಾಗೂ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರೊಂದಿಗೆ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆ ಹಾಗೂ ಮಕ್ಕಳ ಮನೆಗಳಿಗೆ ಭೇಟಿ ನೀಡಿದರು.
ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆನ್ಸನ್ ಮತ್ತು ಲೀಚೆಲ್ ಇಬ್ಬರು ಮಕ್ಕಳನ್ನು ಭೇಟಿ ಮಾಡಿದ್ದು 4 ವರ್ಷ ಪ್ರಾಯದ ಬಾಲಕಿ ಲೀಚೆಲ್ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇನ್ನೋರ್ವ ಬಾಲಕನಾದ ಆನ್ಸನ್‌ನನ್ನು ವಾರ್ಡ್ ಗೆ ವರ್ಗಾಯಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. ಉಳಿದ ಮಕ್ಕಳು ಗುಣ ಮುಖರಾಗಿ ಮನೆಗೆ ಮರಳಿರುತ್ತಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಾಗೂ ಈಗಾಗಲೇ ಚಿಕಿತ್ಸೆ ಪಡೆದು ಬಿಡುಗಡೆ ಹೊಂದಿರುವ 6 ಮಕ್ಕಳಿಗೆ ವೈದ್ಯಕೀಯ ವೆಚ್ಚವನ್ನು ಸರ್ಕಾರದ ಮಟ್ಟದಲ್ಲಿ ಭರಿಸುವ ಬಗ್ಗೆ ಪ್ರಯತ್ನಿಸುವುದಾಗಿ ತಿಳಿಸಿದರು.
ಅಫಘಾತದಲ್ಲಿ ಸಾವನ್ನಪ್ಪಿದ ಎಲ್ಲಾ ಮಕ್ಕಳ ಮನೆಗಳಿಗೆ ಭೆಟಿ ನಿಡಿ ಮಕ್ಕಳ ಪೋಷಕರಿಗೆ ಸಾಂತ್ವನ ನಿಡಿದರು. ಈ ಸಂಧರ್ಭದಲ್ಲಿ ಪೋಷಕರು ವಾಹನ ಸಂಚಾರಕ್ಕೆ ಸೂಕ್ತವಾದ ಮಾರ್ಗ ಇದ್ದರೂ ಸಹ ಈ ದಾರಿಯಲ್ಲಿ ಶಾಲಾ ಮಕ್ಕಳಿಗೆ ಎರಡು ವರ್ಷಗಳಿಂದ ಶಾಲಾ ವಾಹನದ ವ್ಯವಸ್ಥೆಯು ಇಲ್ಲದಿರುವುದರಿಂದ ಖಾಸಗಿ ವಾಹನವನ್ನು ಅವಲಂಬಿಸಿರಬೇಕಾಗಿದ್ದು ಮಕ್ಕಳನ್ನು ಕಳೆದುಕೊಳ್ಳಬೇಕಾದ ಪ್ರಸಂಗ ಒದಗಿರುವುದಾಗಿ ತಮ್ಮ ಅಳಲನ್ನು ವ್ಯಕ್ತ ಪಡಿಸಿದರು.
ಎಲ್ಲಾ ಶಾಲೆಗಳಲ್ಲಿ ಶಾಲಾ ವಾಹನದ ವ್ಯವಸ್ಥೆ ಮಾಡುವಂತೆ ಸರ್ಕಾರದಿಂದ ಪ್ರಯತ್ನಿಸುವ ಭರವಸೆಯನ್ನು ನೀಡಿದರು. ಇನ್ನು ಮುಂದೆ ಇಂತಹ ಅವಘಡಗಳು ಸಂಬಂಧಿಸಿದಂತೆ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸಂಬಂದಪಟ್ಟವರಿಗೆ ತಿಳಿಸುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿರಿ:
ಮೃತ ಪುಟಾಣಿಗಳ ಪೋಷಕರಿಗೆ ಸಾಂತ್ವಾನ ಹೇಳಿದ ಆಸ್ಕರ್; ನೆರವಿನ ಭರವಸೆ-http://kannadigaworld.com/kannada/karavali-kn/267059.html
ತ್ರಾಸಿ ದುರ್ಘಟನೆಯಲ್ಲಿ ಮೃತಪಟ್ಟ 8 ಕಂದಮ್ಮಗಳಿಗೆ ಶೋಕಸಾಗರದೊಂದಿಗೆ ಅಂತಿಮ ವಿದಾಯ-http://kannadigaworld.com/kannada/karavali-kn/266287.html
ತ್ರಾಸಿ: ಅಪಘಾತದಲ್ಲಿ 8 ಮಕ್ಕಳ ಸಾವು; ಶೋಕಸಾಗರದಲ್ಲಿ ಜನತೆ; ಹೆಮ್ಮಾಡಿ ಬಂದ್; ಶಾಲಾ ಕಾಲೇಜು ರಜೆ
ಕುಂದಾಪುರದ ತ್ರಾಸಿಯಲ್ಲಿ ಎಂಟು ಮಕ್ಕಳನ್ನು ಬಲಿಪಡೆದ ಕರಾಳ ಮಂಗಳವಾರ: ಈ ಸಾವಿಗ್ಯಾರು ಹೊಣೆ?
http://kannadigaworld.com/kannada/karavali-kn/266192.html
ತ್ರಾಸಿ ದುರ್ಘಟನೆ ಸಂದರ್ಭ ಸಾಮಾಜಿಕ ಜಾಲತಾಣಗಳ ದುರುಪಯೋಗ; ಸೈಬರ್ ಕ್ರೈಮ್ ವಿಭಾಗಕ್ಕೆ ದೂರು
Comments are closed.